Loading ...
  WELCOME TO TUDA SHASHIDHAR OFFICIAL WEBSITE
Overview
ಶಿಕ್ಷಣ: ಬಿಎಸ್ಸಿ ಪದವಿ
ಕಾಲೇಜು: ಕಲ್ಪತರು ಕಾಲೇಜು, ತಿಪಟೂರು
ಕಳೆದ 25 ವರ್ಷಗಳಿಂದ 'ಆಯಾಮಾ' ಎಂಬ ಡೆವಲಪರ್ ಮತ್ತು ಗೃಹ ನಿರ್ಮಾಣ ಕಂಪನಿಯ ನಿರ್ವಹಣೆ,
ರಾಜಕೀಯ: 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸದಸ್ಯರು
ತಿಪಟೂರು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು (ಅವಧಿ: 2011-2018)
# ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ
3 ವರ್ಷ ತಿಪಟೂರು ಪ್ಲಾನಿಂಗ್ ಅಥಾರಿಟೆಯ ಅಧ್ಯಕ್ಷರು. (ಅವಧಿ: 2015-2018)
ಸಮಾಜ ಸೇವೆ
* ಡಿ.ಎಸ್.ಎಸ್ / ಅಲೆಮಾರಿಗಳ ಸಂಖ್ಯೆ ಅಂಬೇಡ್ಕರ್ ಸಂಶೋಧನಾ ಕೇಂದ್ರ, ರೈತ ಸಂಘ / ಭೂಮಿ ಸಾಂಸ್ಕೃತಿಕ ಕೇಂದ್ರ, ತಿಪಟೂರು ಕೋಮು ಸೌಹಾರ್ದ ಸಂಘ ಹಾಗೂ ಮುಂತಾದ ಸಂಸ್ಥೆಗಳಲ್ಲಿ 20 ವರ್ಷಗಳಿಂದ ಸಕ್ರಿಯವಾಗಿ ಭಾಗಿ. ಮೂಲಭೂತ ಸೌಕರ್ಯ, ಕೋಮು ಸೌಹಾರ್ದತೆ, ಅಗತ್ಯವಿರುವ ಜನರ ಮಾನವ ಹಕ್ಕುಗಳ ರಕ್ಷಣೆಗಾಗಿ ಹಲವಾರು ಪ್ರತಿಭಟನೆಗಳು, ಕಾರ್ಯಕ್ರಮಗಳು ಮತ್ತು ಸಮಾವೇಶಗಳಲ್ಲಿ ಭಾಗಿ, ಉಚಿತ ಆರೋಗ್ಯ ಶಿಬಿರಗಳು, ಜೈಲು ಖೈದಿಗಳಿಗೆ ಮಾನಸಿಕ ಕಾರ್ಯಕ್ರಮಗಳು, ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಧನಸಹಾಯ, ಮನೆಯಿಲ್ಲದವರಿಗೆ ಮನೆಗಳನ್ನು ಪಡೆಯಲು ಸಹಾಯ ಮತ್ತು ಮಕ್ಕಳಿಗೆ ಶಿಕ್ಷಣ, ಬಟ್ಟೆಗಳು ಹಾಗೂ ಪುಸ್ತಕಗಳಿಗಾಗಿ ಸಹಾಯ ರಾಷ್ಟ್ರೀಯ ಹೆದ್ದಾರಿ 206 ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರಕ್ಕಾಗಿ ರೈತ ಸಂಘಟನೆಗಳೊಂದಿಗೆ ನಿರಂತರ ಹೋರಾಟ. ತಿಪಟೂರು ತಾಲ್ಲೂಕು ಮೂಲಕ ಹಾದು ಹೋಗುತ್ತಿರುವ ಎತ್ತಿನಹೊಳೆ ಯೋಜನೆಯಿಂದ ತಾಲ್ಲೂಕಿನ ಕೆರೆಗಳಿಗೆ ಹರಿಸಲು ರೈತ ಸಂಘಟನೆಗಳೊಂದಿಗೆ ನಿರಂತರ ಹೋರಾಟ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರ ಪರ ನ್ಯಾಯಯುತ ಪರಿಹಾರಕ್ಕಾಗಿ ಹೋರಾಟ. ಆರ್.ಸಿ.ಇ.ಪಿ ಒಪ್ಪಂದದ ವಿರುದ್ದ - ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆ ಜೊತೆ ಹೋರಾಟ, ಹೈದರಾಬಾದ್ ಪಶುವೈದ್ಯ ಪ್ರಿಯಾಂಕ ರೆಡ್ಡಿ ಅತ್ಯಾಚಾರ ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳೊಂದಿಗೆ, ಹೋರಾಟ.

ಸಿ.ಎಎ ಮತ್ತು ಎನ್.ಆರ್.ಸಿ ಕಾಯ್ದೆ ವಿರೋಧಿಸಿ: ಕೇಂದ್ರ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ಮತ್ತು 4000 ಸಾವಿರಕ್ಕೂ ಹೆಚ್ಚು ಜನರ ಬೃಹತ್ ಮಟ್ಟದ ಹೋರಾಟದ ಮುಂದಾಳತ್ವ. ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ತುಮಕೂರು ಟೌನ್ ಹಾಲ್ ವೃತ್ತದಲ್ಲಿ ನಡೆದ ಹೋರಾಟದಲ್ಲಿ ಭಾಗಿ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ದರ್ಜಿಗರು, ವಿಶ್ವಕರ್ಮ, ಹೂಗಾರರು, ಅರ್ಚಕರು, ನೇಕಾರರು, ಟ್ಯಾಕ್ಸಿ ಮತ್ತು ಆಟೋ ಡ್ರೈವರ್, ಶಾಲಾ ಬಿಸಿಯೂಟ ಸಹಾಯಕಿಯರು, ಕುಂಬಾರರು, ಸವಿತಾ ಸಮಾಜ, ವಿಧವೆಯರು, ಅಂಗವಿಕಲರು ಮುಂತಾದ ಸಮುದಾಯ ಹಾಗೂ ಶ್ರಮಿಕ ವರ್ಗದವರಿಗೆ ಸುಮಾರು 5,000ಕ್ಕೂ ಅಧಿಕ ಆಹಾರ ಧಾನ್ಯಗಳ ಕಿಟ್ ವಿತರಣೆ.

ತಿಪಟೂರು ತಾಲ್ಲೂಕಿನಲ್ಲಿ ಜನಸ್ಪಂದನ ಟ್ರಸ್ಟ್ ಮೂಲಕ ಆರೋಗ್ಯ ಸಂಬಂಧ ವ್ಯಕ್ತಿಗಳಿಗೆ ಆರ್ಥಿಕ ಧನ ಸಹಾಯ. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ಅಧ್ಯಕ್ಷರಾದ ಸಂದರ್ಭದಲ್ಲಿ ಹಾಲ್ಕುರಿಕೆ ಗ್ರಾಮದಲ್ಲಿ 'ಪ್ರತಿಜ್ಞಾ ದಿನ' ಕಾರ್ಯಕ್ರಮ ಆಯೋಜನೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ಪರವಾಗಿ ಪತ್ರಿಕಾಗೋಷ್ಠಿ ಹಾಗೂ ಪತ್ರ ಚಳುವಳಿಯಲ್ಲಿ ಭಾಗಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಆರ್ಥಿಕ ಧನಸಹಾಯ, ದೇವಸ್ಥಾನಗಳ ನಿರ್ಮಾಣ ಹಾಗೂ ಪುನರುಜ್ಜೀವ ಕಾರ್ಯಗಳಿಗೆ ಆರ್ಥಿಕ ನೆರವು. ಕ್ರೀಡಾ ಉತ್ತೇಜನಗಾಗಿ ಟೂರ್ನಿಮೆಂಟ್‌ಗಳ ಆಯೋಜನೆ.

ಕಳೆದ 5 ವರ್ಷಗಳಿಂದ ಹೊನ್ನವಳ್ಳಿ ಏತ ನೀರಾವರಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿ. ದೆಹಲಿಯ ರೈತ ನಾಯಕ ರಾಕೇಶ್ ಟಿಕಾಯತ್‌ರ ಸಮ್ಮುಖದಲ್ಲಿ, ತಿಪಟೂರಿನಲ್ಲಿ ನಡೆದ ಕೃಷಿ ಕಾಯ್ದೆ ವಿರೋಧಿಸಿ ಸರ್ಕಾರದ ವಿರುದ್ಧ ಬೃಹತ್ ಹೋರಾಟದ ಮುಂದಾಳತ್ವ ಹಾಗೂ ಅವರೊಂದಿಗೆ ಶಿವಮೊಗ್ಗದಲ್ಲಿ ನಡೆದ ರೈತ ಮಹಾಪಂಚಾಯತ್‌ನಲ್ಲಿ ಭಾಗಿ.
Personal Info
  • About Me: ಸಿ.ಬಿ ಶಶಿಧರ, ತಿಪಟೂರು ಮಾಜಿ ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರ, ತಿಪಟೂರು, ಬ್ಲಾಕ್ ಕಾಂಗ್ರೆಸ್ ಸಮಿತಿ, ತಿಪಟೂರು. ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್ ಸಮಿತಿ, ತುಮಕೂರು
  • Birthday: February 2nd 1973
  • Lives in: ತಿಪಟೂರು
  • Occupation: ಆಯಾಮಾ ಕಂಪನಿಯ ನಿರ್ವಹಣೆ
  • Gender: Male
  • Status: Married
  • Email: jspiegel@yourmail.com
  • Website: tudashashidhar.com
  • Phone Number: (+91) 7899810812
Other Social Networks: