Loading ...
  WELCOME TO TUDA SHASHIDHAR OFFICIAL WEBSITE
Agriculture

* ಡಿ.ಎಸ್.ಎಸ್ / ಅಲೆಮಾರಿಗಳ ಸಂಖ್ಯೆ ಅಂಬೇಡ್ಕರ್ ಸಂಶೋಧನಾ ಕೇಂದ್ರ, ರೈತ ಸಂಘ / ಭೂಮಿ ಸಾಂಸ್ಕೃತಿಕ ಕೇಂದ್ರ, ತಿಪಟೂರು ಕೋಮು ಸೌಹಾರ್ದ ಸಂಘ ಹಾಗೂ ಮುಂತಾದ ಸಂಸ್ಥೆಗಳಲ್ಲಿ 20 ವರ್ಷಗಳಿಂದ ಸಕ್ರಿಯವಾಗಿ ಭಾಗಿ. ಮೂಲಭೂತ ಸೌಕರ್ಯ, ಕೋಮು ಸೌಹಾರ್ದತೆ, ಅಗತ್ಯವಿರುವ ಜನರ ಮಾನವ ಹಕ್ಕುಗಳ ರಕ್ಷಣೆಗಾಗಿ ಹಲವಾರು ಪ್ರತಿಭಟನೆಗಳು, ಕಾರ್ಯಕ್ರಮಗಳು ಮತ್ತು ಸಮಾವೇಶಗಳಲ್ಲಿ ಭಾಗಿ, ಉಚಿತ ಆರೋಗ್ಯ ಶಿಬಿರಗಳು, ಜೈಲು ಖೈದಿಗಳಿಗೆ ಮಾನಸಿಕ ಕಾರ್ಯಕ್ರಮಗಳು, ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಧನಸಹಾಯ, ಮನೆಯಿಲ್ಲದವರಿಗೆ ಮನೆಗಳನ್ನು ಪಡೆಯಲು ಸಹಾಯ ಮತ್ತು ಮಕ್ಕಳಿಗೆ ಶಿಕ್ಷಣ, ಬಟ್ಟೆಗಳು ಹಾಗೂ ಪುಸ್ತಕಗಳಿಗಾಗಿ ಸಹಾಯ ರಾಷ್ಟ್ರೀಯ ಹೆದ್ದಾರಿ 206 ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರಕ್ಕಾಗಿ ರೈತ ಸಂಘಟನೆಗಳೊಂದಿಗೆ ನಿರಂತರ ಹೋರಾಟ. ತಿಪಟೂರು ತಾಲ್ಲೂಕು ಮೂಲಕ ಹಾದು ಹೋಗುತ್ತಿರುವ ಎತ್ತಿನಹೊಳೆ ಯೋಜನೆಯಿಂದ ತಾಲ್ಲೂಕಿನ ಕೆರೆಗಳಿಗೆ ಹರಿಸಲು ರೈತ ಸಂಘಟನೆಗಳೊಂದಿಗೆ ನಿರಂತರ ಹೋರಾಟ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರ ಪರ ನ್ಯಾಯಯುತ ಪರಿಹಾರಕ್ಕಾಗಿ ಹೋರಾಟ. ಆರ್.ಸಿ.ಇ.ಪಿ ಒಪ್ಪಂದದ ವಿರುದ್ದ - ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆ ಜೊತೆ ಹೋರಾಟ, ಹೈದರಾಬಾದ್ ಪಶುವೈದ್ಯ ಪ್ರಿಯಾಂಕ ರೆಡ್ಡಿ ಅತ್ಯಾಚಾರ ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳೊಂದಿಗೆ, ಹೋರಾಟ.